22.2 C
ಬೆಂಗಳೂರು
August 6, 2026
kranthikidi.com
ಆರೋಗ್ಯತಾಜಾಸುದ್ದಿ

ರಾತ್ರಿ ಮಲಗುವ ಮುನ್ನ, ಈ ಕೆಲಸ ಮಾಡಿ ನೆಮ್ಮದಿಯ ನಿದ್ರೆ ಮಾಡುವಿರಿ..!

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ನೀರು ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಲು ನಿತ್ಯ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯುವುದು ಸಹ ಅಷ್ಟೇ ಮುಖ್ಯ. ಹೌದು ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮನಸ್ಥಿತಿಯನ್ನು ಚೆನ್ನಾಗಿಡಲು, ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಆದರೆ, ಇಂದಿನ ಒತ್ತಡದ ಹಾಗೂ ಅನಾರೋಗ್ಯಕರ ಜೀವನಶೈಲಿಯ ಕಾರಣ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ನಿಮಗೂ ಕೂಡ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ರೆ ಪ್ರತಿ ರಾತ್ರಿ ಮಲಗುವ ಮುನ್ನ ತಪ್ಪದೇ ಈ ಒಂದಷ್ಟು ಕೆಲಸಗಳನ್ನು ಮಾಡಿ, ಇವು ನಿಮಗೆ ನೆಮ್ಮದಿಯ ನಿದ್ರೆ ಪಡೆಯಲು ತುಂಬಾನೇ ಸಹಾಯ ಮಾಡುತ್ತವೆ.

ಉತ್ತಮ ನಿದ್ರೆ ಪಡೆಯಲು ರಾತ್ರಿ ಮಲಗುವ ಮುನ್ನ ಏನು ಮಾಡಬೇಕು?; ನಿಮ್ಮ ಮಲಗುವ ಸಮಯವನ್ನು ಸರಿಪಡಿಸಿಕೊಳ್ಳಿ – ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಲು ಮತ್ತು ಎಚ್ಚರಗೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ರಾತ್ರಿ 9 ಗಂಟೆಗೆ ಮಲಗಿ ಬೆಳಗ್ಗೆ 5 ಗಂಟೆಗೆ ಎದ್ದೇಳಿ. ಪ್ರತಿನಿತ್ಯ ಇದೇ ಸಮಯಕ್ಕೆ ಮಲಗಿ. ಇದು ನಿಮ್ಮ ದೇಹದ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಮಲಗುವ ಒಂದು ಗಂಟೆ ಮೊದಲು ಮೊಬೈಲ್‌ನಿಂದ ದೂರವಿರಿ : ಇತ್ತೀಚಿನ ದಿನಗಳಲ್ಲಿ ಅನೇಕರು ಸೋಷಿಯಲ್‌ ಮೀಡಿಯಾ ನೋಡುತ್ತಾ, ಮೊಬೈಲ್‌ ಸ್ಕ್ರೋಲ್‌ ಮಾಡುತ್ತಾ ಕುಳಿತು ಬಿಡುತ್ತಾರೆ ಮತ್ತು ತಡ ರಾತ್ರಿಯವರೆಗೆ ಎಚ್ಚರಗೊಂಡಿರುತ್ತಾರೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಿಂದ ಬರುವ ನೀಲಿ ಬೆಳಕು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಮಲಗುವ ಒಂದು ಗಂಟೆಗೂ ಮುನ್ನ ಮೊಬೈಲ್‌, ಟಿವಿ ನೋಡುವುದನ್ನು ಸ್ಟಾಪ್‌ ಮಾಡಿ. ಸಾಧ್ಯವಾದರೆ ಈ ಸಮಯದಲ್ಲಿ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.

ಹಗುರವಾದ ಆಹಾರ ಸೇವಿಸಿ : ಮಲಗುವ ಸಮಯಕ್ಕೆ ಕನಿಷ್ಠ 2 ರಿಂದ 3 ಗಂಟೆಗಳ ಮೊದಲು ಊಟ ಮಾಡಿ. ಭಾರವಾದ, ಮಸಾಲೆಯುಕ್ತ ಅಥವಾ ಹುರಿದ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ರಾತ್ರಿ ಹಗುರವಾದ ಊಟ ಮಾಡಿ.

ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ : ಸಂಜೆಯ ಬಳಿಕ ಚಹಾ, ಕಾಫಿ, ಎನರ್ಜಿ ಡ್ರಿಂಕ್ಸ್ ಅಥವಾ ಆಲ್ಕೋಹಾಲ್ ಸೇವಿಸುವುದು ಅಷ್ಟೇನೂ ಒಳ್ಳೆಯದಲ್ಲ. ಏಕೆಂದರೆ ಇವು ನಿದ್ರೆಯ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ನಿದ್ರೆಗೆ ಸಾಕಷ್ಟು ಅಡ್ಡಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ರಾತ್ರಿ ಹೊತ್ತು ಕೆಫೀನ್‌ ಸೇವನೆಯನ್ನು ತಪ್ಪಿಸಿ.

ಧ್ಯಾನ ಮಾಡಿ : ಉತ್ತಮ ನಿದ್ರೆ ಪಡೆಯಲು ಮಲಗುವ ಮುನ್ನ 5 10 ನಿಮಿಷಗಳ ಧ್ಯಾನ ಮಾಡಿ. ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಅಥವಾ ಲಘು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತಗೊಳ್ಳುತ್ತದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಧ್ಯಾನ ಮಾತ್ರವಲ್ಲದೆ ಪುಸ್ತಕ ಓದುವುದು, ಶಾಂತ ಸಂಗೀತವನ್ನು ಕೇಳುವ ಮೂಲಕವೂ ಉತ್ತಮ ನಿದ್ರೆಯನ್ನು ಪಡೆಯಬಹುದು. ಇದನ್ನೂ ಓದಿ : ಹಾಲೇತರ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ ಜೈಲು..!

Related posts

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ–ತಮಿಳುನಾಡು ಅತ್ತಿಬೆಲೆ ಗಡಿ ಬಂದ್..!

Kalpana Editor

ಓರ್ವ ನಟಿ ಬಿಟ್ಟು ಉಳಿದೆಲ್ಲರನ್ನ ಅನ್‌ಫಾಲೋ ಮಾಡಿದ ಕರಣ್ ಜೋಹರ್

Kalpana Editor

ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

Kalpana Editor