22.2 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿಸಿನಿಮಾ

ಎಐ, ಡೀಪ್‌ಫೇಕ್ ಮಾಡಿದ್ರೆ ಹುಷಾರ್ – ನಟಿ ಮೃಣಾಲ್ ಠಾಕೂರ್ ವಾರ್ನಿಂಗ್..!

ನಟಿಯರ ಡೀಪ್‌ಫೇಕ್ ವೀಡಿಯೋಗಳನ್ನು ಮಾಡುವ ವಿರುದ್ಧ ಈಗಾಗ್ಲೇ ಅನೇಕ ನಟಿಯರು ದನಿ ಎತ್ತಿದ್ದಾರೆ. ರಶ್ಮಿಕಾ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಕಾನೂನು ಹೋರಾಟವನ್ನೂ ಮಾಡಿದ್ದಾರೆ. ಇದೀಗ ಮೃಣಾಲ್ ಠಾಕೂರ್ ಸರದಿ. ಆದರೆ ಅವರು ಹೋರಾಟಕ್ಕೂ ಮೊದಲೇ ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಮೃಣಾಲ್ `ನನ್ನ ಕುರಿತು ಡೀಪ್‌ಫೇಕ್ ಸೃಷ್ಟಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ, ಇದು ನಿಮಗೆ ನೀಡಲಾದ ಅಧಿಕೃತ ಸೂಚನೆ ಎಂದು ಪರಿಗಣಿಸಿ’ ಹೀಗೆಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಎಐ ರಚಿತ ಡೀಪ್‌ಫೇಕ್‌ಗಳ ವಿರುದ್ಧ ಮೃಣಾಲ್ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ. ಎಐ ತಂತ್ರಜ್ಞಾನ ಉಪಯೋಗಿಸಿ ಹೆಚ್ಚಿನ ನಟಿಯರ ಗುರುತಿನಿಂದ ಎಐ ಚಿತ್ರಗಳು ಮತ್ತು ಧ್ವನಿಗಳ ಅನಧಿಕೃತ ಬಳಕೆಯ ದುರ್ನಡತೆ ಹೆಚ್ಚಾಗುತ್ತಿದೆ.

ಹೀಗೆ ಮೃಣಾಲ್ ಠಾಕೂರ್ ಕುರಿತ ಡೀಪ್‌ಫೇಕ್ ವೀಡಿಯೋಗಳು ಹೆಚ್ಚಾಗಿರುವ ಮಾಹಿತಿ ಮೃಣಾಲ್‌ಗೆ ಸಿಕ್ಕಂತಿದೆ. ಹೀಗಾಗಿ ಅಧಿಕೃತವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಕೃತಕ ಬುದ್ಧಿಮತ್ತೆ ಮೂಲಕ ಡೀಪ್‌ಫೇಕ್ ದುರ್ಬಳಕೆ ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ನನ್ನ ರೂಪ ಅಥವಾ ಹೋಲಿಕೆಯನ್ನು ಬಳಸಿಕೊಂಡು ಡೀಪ್‌ಫೇಕ್ ವಿಷಯವನ್ನು ಸೃಷ್ಟಿಸುವುದು ಅಥವಾ ಹಂಚಿಕೊಳ್ಳುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ. ಇದನ್ನು ತಕ್ಷಣವೇ ನಿಲ್ಲಿಸುವಂತೆ ನಿಮಗೆ ನೀಡಲಾದ ಅಧಿಕೃತ ಸೂಚನೆ ಎಂದು ಪರಿಗಣಿಸಿ. ನನ್ನ ಗುರುತಿನ ಮತ್ತಷ್ಟು ದುರ್ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸಂದೇಶ ನೀಡಿದ್ದಾರೆ. ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೆ ಜೆಸಿಬಿ ಘರ್ಜನೆ; ಕೆ.ಆರ್.‌ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ..!

Related posts

ಬಿಡದಿ ಟೌನ್‌ಶಿಪ್‌ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸಲ್ಲಿಸಿದ್ದ, ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌..!

Kalpana Editor

ಕಿಂಡರ್‌ಗಾರ್ಟನ್‌ನಿಂದ ಪಿಜಿವರೆಗೆ ಉಚಿತ ಶಿಕ್ಷಣ; ಒಡಿಶಾ ಸರ್ಕಾರ ಘೋಷಣೆ..!

Kalpana Editor

ಬೈಜುಸ್ ಸಂಸ್ಥಾಪಕ ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ..!

Kalpana Editor