20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿವಿದೇಶ

ಇರಾನ್‌ನ 20 ಸ್ಥಳಗಳನ್ನು ಗುರಿಯಾಗಿಸಿ, ಇಸ್ರೇಲ್ ಬಾಂಬ್ ದಾಳಿ..!

ಟೆಹ್ರಾನ್ : ಕದನ ವಿರಾಮ ಜಾರಿಗೆ ಬಂದ ನಂತರ ಮೊದಲ ಬಾರಿಗೆ ಭಾನುವಾರ ಮಧ್ಯರಾತ್ರಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇಸ್ರೇಲಿ ಸೇನೆ ಕೂಡ ಇರಾನ್‌ನ 20 ಸ್ಥಳಗಳನ್ನು ಗುರಿಯಾಗಿಸಿ, ಪ್ರತಿದಾಳಿ ನಡೆಸಿದೆ. ಇಸ್ರೇಲ್ ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಇರಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿರುವ ಸೇನಾ ಗುರಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಇರಾನ್ ಆಡಳಿತಕ್ಕೆ ಸೇರಿದ ಸೇನಾ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದರೂ, ಯಾವ ಪ್ರದೇಶಗಳನ್ನು ಹೊಡೆದುರುಳಿಸಲಾಗಿದೆ ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ದಾಳಿಯ ಬಳಿಕ ಇರಾನ್‌ನ ಇಸ್ಫಹಾನ್, ಕರಾಜ್, ತಬ್ರೀಜ್ ಹಾಗೂ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ಎಚ್ಚರಿಕೆಯಿಲ್ಲದೆ ಇಸ್ರೇಲ್ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ಮಾಡಿದ ನಂತರ ಟೆಹ್ರಾನ್ ಪ್ರತೀಕಾರದ ಎಚ್ಚರಿಕೆ ನೀಡಿತ್ತು. ಇರಾನಿನ ಬೆಂಬಲಿತ ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ ಮುಂಜಾನೆ ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿದೆ. ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿರುವಂತೆಯೇ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷ ಹೆಚ್ಚಾಗಿದೆ. ಇದರಿಂದಾಗಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ.

ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಸಂಭವನೀಯ ಪ್ರತಿಕ್ರಿಯೆಗಾಗಿ ತನ್ನ ಪಶ್ಚಿಮ ವಾಯುಪ್ರದೇಶವನ್ನ ಇರಾನ್ ಮುಚ್ಚಿದೆ. ಸಂಭಾವ್ಯ ಇಸ್ರೇಲಿ ಆಕ್ರಮಣಕ್ಕೆ ಸಿದ್ಧವಾಗಲು ನೆರೆಯ ಇರಾಕ್ ಮತ್ತು ಸಿರಿಯಾ ಕೂಡ ತಮ್ಮ ವಾಯುಸೀಮೆಯನ್ನ ಬಂದ್ ಮಾಡಿವೆ. ಈ ಮಧ್ಯೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಹೊರತಾಗಿಯೂ ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ಪ್ರಿಯಕರನ ಜೊತೆ ಬಾಳಲು ಮಗಳನ್ನೇ ಕೊಂದ ತಾಯಿ – ಮೂರು ತಿಂಗಳ ಬಳಿಕ FIR ದಾಖಲು..!

ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಡಿ, ರಾಜತಾಂತ್ರಿಕತೆಗೆ ಹೆಚ್ಚಿನ ಸಮಯ ನೀಡಬೇಕೆಂದು ನೆತನ್ಯಾಹುಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ತನ್ನ ಮೇಲೆ ದಾಳಿ ಮಾಡುವ ಮೂಲಕ ಇರಾನ್ ‘ಗಂಭೀರ ತಪ್ಪು’ ಮಾಡಿದೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ. ಇರಾನ್‌ನ 11 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.

ಹೆಜ್ಜುಲ್ಲಾ ಬಂಡುಕೋರರ ಗುಂಪು ಉತ್ತರ ಇಸ್ರೇಲ್ ಕಡೆಗೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ದಕ್ಷಿಣ ಬೈರೂತ್‌ನ ಉಪನಗರಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೊಂಡಿದ್ದಾರೆ. ಇತ್ತ ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿರುವ ಇಸ್ರೇಲ್ ಮಿಲಿಟರಿ ಪಡೆ, ಪ್ರತೀಕಾರಕ್ಕೆ ದಾಳಿಗೆ ಮುಂದಾಗುತ್ತಿದೆ. ಮತ್ತೊಂದು ಕಡೆ ಇರಾನ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸಹ ದಾಳಿ ನಡೆಸುತ್ತಿದೆ.

Related posts

ಮಲೆನಾಡಲ್ಲಿ ಹೊಸ ಫಾರ್ಮ್‌ಹೌಸ್‌ ಖರೀದಿಸಿದ ನಟಿ ಸಪ್ತಮಿಗೌಡ

Kalpana Editor

ಕುಟುಂಬ ಸಮೇತರಾಗಿ, ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದ್ರು ಸಿಎಂ ಡಿಕೆಶಿ

Kalpana Editor

ಕರಾವಳಿಯಲ್ಲಿ ಭಾರೀ ಮಳೆ – ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ನೀರು

Kalpana Editor