August 24, 2026
kranthikidi.com
ತಾಜಾಸುದ್ದಿರಾಜ್ಯ

ತಡರಾತ್ರಿವರೆಗೆ ಸಚಿವ ಕೃಷ್ಣಬೈರೇಗೌಡ ಸಿಟಿ ರೌಂಡ್ಸ್ – ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌..!

ಬೆಂಗಳೂರು : ನೆನ್ನೆ (ಗುರುವಾರ) ತಡರಾತ್ರಿವರೆಗೆ ಸಿಟಿ ರೌಂಡ್ಸ್ ನಡೆಸಿದ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಅವರು ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮಹದೇವಪುರದ ಲೌರಿ ಸರ್ಕಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ರಸ್ತೆಯ ಎರಡು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ರು. ರಾತ್ರಿ 10:30ವರೆಗೆ ಶುರುವಾದ ರೌಂಡ್ಸ್ ತಡರಾತ್ರಿ 2:30ರ ತನಕ ನಡೆಯಿತು. ಈ ವೇಳೆ ಎಲ್ಲಾ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಜರಿದ್ದು, ಅವ್ಯವಸ್ಥೆಗಳ ವಿರುದ್ಧ ಸ್ಥಳದಲ್ಲೇ ಸಚಿವರು ಕ್ಲಾಸ್ ತಗೊಂಡು ಸರಿಯಾಗಿ ಕೆಲಸ ಮಾಡುವಂತೆ ವಾರ್ನ್ ಮಾಡಿದ್ದಾರೆ.

ಇದೇ ವೇಳೆ ಮಾತಾಡಿದ ಸಚಿವರು, ನಗರದಲ್ಲಿ ಪುಟ್‌ಪಾತ್ ತೆರವು ಕಾರ್ಯಚರಣೆಗೆ ಕೆಲವರಿಂದ ವಿರೋಧ ವ್ಯಕ್ತವಾಗ್ತಿದೆ. ಆದ್ರೆ ಯಾವುದೇ ಕಾರಣಕ್ಕೂ ಈ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ. ಮುಖ್ಯರಸ್ತೆಗಳಿಂದ ಮಾತ್ರ ತೆರವು ಮಾಡ್ತಿದ್ದೀವಿ. ನಗರದ ಇನ್ನುಳಿದ ರಸ್ತೆಗಳಲ್ಲಿ ಈಗಲೂ ವ್ಯಾಪಾರ ಮಾಡಿಕೊಳ್ಳಬಹುದು.

ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆ ಆಗದಂತೆ ತಡೆಯಲು ಮಾತ್ರ ಈ ಕೆಲಸ ಮಾಡ್ತಿದ್ದೇವೆ. ಇನ್ನೂ ಟ್ರಾಫಿಕ್ ಸಮಸ್ಯೆ ಇರುವ ರಸ್ತೆಗಳನ್ನು ರಿ-ಡಿಸೈನ್ ಮಾಡಬೇಕಿದೆ. ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡು ರಿ-ಡಿಸೈನ್ ಮಾಡಲಾಗುವುದು ಎಂಬ ಮಾಹಿತಿಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಮೀಟರ್​​​ ರೀಡಿಂಗ್​​ ಇಲ್ಲ – ಜುಲೈ ತಿಂಗಳ ಕರೆಂಟ್​ ಬಿಲ್​​ ಬರಲ್ಲ..!

Related posts

ಮೋದಿಯನ್ನು ನಿಂದಿಸಿ ವಿಡಿಯೋ ಹರಿಬಿಟ್ಟ, ಯುವಕ ಪೊಲೀಸ್ ವಶಕ್ಕೆ..!

Kalpana Editor

ಕುಟುಂಬ ಸಮೇತರಾಗಿ, ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದ್ರು ಸಿಎಂ ಡಿಕೆಶಿ

Kalpana Editor

ಸಿಎಂ ಆದ ಬಳಿಕ ವಿಜಯ್‌ರನ್ನ ಭೇಟಿಯಾದ ನಟಿ ಸಮಂತಾ

Kalpana Editor