kranthikidi.com
ತಾಜಾಸುದ್ದಿರಾಜ್ಯ

ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ ಮಳೆ; ಕರ್ನಾಟಕದಲ್ಲಿ ಎಲ್ಲಿ ಎಷ್ಟು ಮಳೆ..?!

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆಗಸ್ಟ್‌ 1 ಬೆಳಗ್ಗೆ 8:30 ರಿಂದ ಆಗಸ್ಟ್‌ 2ರ 7:30ರ ವೇಳೆಗೆ 50 ಮಿ ಮೀಗಿಂದ ಹೆಚ್ಚು ಮಳೆಯಾದ ಸ್ಥಳಗಳ ವಿವರವನ್ನು ಪ್ರಕಟಿಸಿದೆ.

ಮುಂಡಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಮುಖ ನದಿ ಮತ್ತು ತೋಡುಗಳು ಮೈದುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ-ತೋಡುಗಳ ನೀರು ಸನಿಹದ ಕೃಷಿ ಭೂಮಿಗಳಿಗೆ ನುಗ್ಗಿದ್ದು, ನೂರಾರು ಎಕರೆ ಗದ್ದೆ ಮತ್ತು ಅಡಿಕೆ-ತೆಂಗಿನ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಹಲವಾರು ತೋಟಗಳಿಗೆ ನೀರು ನುಗ್ಗಿರುವ ಪರಿಣಾಮ ಕೃಷಿಕರು ಭಾರೀ ಕೃಷಿ ಹಾನಿಯ ಭೀತಿಯಲ್ಲಿದ್ದಾರೆ.

ಅಷ್ಟೇ ಅಲ್ಲದೆ, ತಗ್ಗಿನ ಪ್ರದೇಶದಲ್ಲಿದ್ದ ಕೆಲವು ಮನೆಗಳಿಗೂ ಪ್ರವಾಹದ ನೀರು ನುಗ್ಗಿದ್ದು, ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ತೀವ್ರತೆಗೆ ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಗೆ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಪ್ರಸಿದ್ಧ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಪ್ರವಾಹದ ನೀರು ನದಿಯಂತೆ ಹರಿಯುತ್ತಿದ್ದು, ಸಂಚಾರ ತೀವ್ರ ಅಡಚಣೆಗೊಂಡಿದೆ. ವಾಹನ ಸವಾರರು ಮತ್ತು ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳು ಜಾಗರೂಕರಾಗಿರುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಎಲ್ಲಿ ಎಷ್ಟು ಮಳೆ? – ಜಿಲ್ಲೆ- ತಾಲೂಕು- ಮಳೆ (ಮಿ.ಮೀ.), ದಕ್ಷಿಣ ಕನ್ನಡ – ಬೆಳ್ತಂಗಡಿ – ಮುಂಡಾಜೆ, 348.5, ದಕ್ಷಿಣ ಕನ್ನಡ – ಬೆಳ್ತಂಗಡಿ – ಕಲ್ಮಂಜ, 283.5, ಚಿಕ್ಕಮಗಳೂರು – ಕೊಪ್ಪ – ಶಾನುವಳ್ಳಿ, 281, ಶಿವಮೊಗ್ಗ – ಹೊಸನಗರ – ನಗರ,2 67.25, ಚಿಕ್ಕಮಗಳೂರು – ಶೃಂಗೇರಿ – ಬೆಗಾರ್, 255.5, ಶಿವಮೊಗ್ಗ – ಹೊಸನಗರ – ಯದೂರು,252, ಶಿವಮೊಗ್ಗ – ಹೊಸನಗರ – ಕರಿಮನೆ,250, ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ 1,238.6, ಚಿಕ್ಕಮಗಳೂರು – ಶೃಂಗೇರಿ – ಕಿಗ್ಗ,236.5, ಶಿವಮೊಗ್ಗ – ತೀರ್ಥಹಳ್ಳಿ – ಅರಳಸುರಳಿ, 234, ಚಿಕ್ಕಮಗಳೂರು – ಶೃಂಗೇರಿ – ಅಡ್ಡಗದ್ದೆ, 232, ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ, 227.75..,

ಚಿಕ್ಕಮಗಳೂರು – ಕೊಪ್ಪ – ಭುವನಕೋಟೆ, 226.5, ಚಿಕ್ಕಮಗಳೂರು – ಶೃಂಗೇರಿ, 221.8, ಶಿವಮೊಗ್ಗ – ಹೊಸನಗರ – ಸುಳಾಗೋಡು, 221.5, ಶಿವಮೊಗ್ಗ – ಹೊಸನಗರ – ಕೈರಾಕುಂದ, 219, ಶಿವಮೊಗ್ಗ – ತೀರ್ಥಹಳ್ಳಿ – ಹೊಸಹಳ್ಳಿ, 217.5, ಉಡುಪಿ – ಕಾರ್ಕಳ – ಮಾಳ, 210.5, ದಕ್ಷಿಣ ಕನ್ನಡ – ಮಂಗಳೂರು – ನೆಲ್ಲಿಕಾರು,207, ಚಿಕ್ಕಮಗಳೂರು – ಕೊಪ್ಪ – ತುಳುವಿನಕೊಪ್ಪ,199.5, ಚಿಕ್ಕಮಗಳೂರು – ಶೃಂಗೇರಿ – ವಿದ್ಯಾರಣ್ಯಪುರ,199.5, ಉತ್ತರ ಕನ್ನಡ – ಸಿದ್ಧಾಪುರ – ದೊಡ್ಡಮನೆ,190.5, ಕೊಡಗು – ಮಡಿಕೇರಿ – ಪೆರಾಜೆ,190, ಶಿವಮೊಗ್ಗ – ಹೊಸನಗರ – ತೃಣಿವೆ,187.5, ಚಿಕ್ಕಮಗಳೂರು – ಕೊಪ್ಪ – ನರಸಿಂಹಪುರ (ನಾರ್ವೆ),187..,

ಶಿವಮೊಗ್ಗ – ತೀರ್ಥಹಳ್ಳಿ,186.25, ಶಿವಮೊಗ್ಗ – ಹೊಸನಗರ – ನಿಟಿರು,185.5, ಉಡುಪಿ – ಕಾರ್ಕಳ – ಮೂಡಾರು (ಬಾಜೇಗೋಳಿ),185.5, ಚಿಕ್ಕಮಗಳೂರು – ಕೊಪ್ಪ – ಆಸಗೋಡು,183.5, ಉತ್ತರ ಕನ್ನಡ – ಸಿದ್ಧಾಪುರ – ಹಾರ್ಸಿಕಟ್ಟ,183, ದಕ್ಷಿಣ ಕನ್ನಡ – ಬೆಳ್ತಂಗಡಿ,179.6, ಕೊಡಗು – ಮಡಿಕೇರಿ – ಮದೆ,178.5, ಶಿವಮೊಗ್ಗ – ತೀರ್ಥಹಳ್ಳಿ – ಬಸವನಿ,177.5, ಚಿಕ್ಕಮಗಳೂರು – ಶೃಂಗೇರಿ – ಮೆಣಸೆ,177.5, ಶಿವಮೊಗ್ಗ – ಸೊರಬ – ಚಂದ್ರಗುತ್ತಿ,174.75, ಶಿವಮೊಗ್ಗ – ಸಾಗರ – ಕಾನಲೆ,174.5, ದಕ್ಷಿಣ ಕನ್ನಡ – ಸುಳ್ಯ – ಸಂಪಾಜೆ,169, ಶಿವಮೊಗ್ಗ – ತೀರ್ಥಹಳ್ಳಿ – ನೇರಾಟೂರು,168, ಉಡುಪಿ – ಕಾರ್ಕಳ – ನಲ್ಲೂರು,167.5, ಶಿವಮೊಗ್ಗ – ತೀರ್ಥಹಳ್ಳಿ – ಮೇಲಿನಕುರುವಳ್ಳಿ,166.5, ಚಿಕ್ಕಮಗಳೂರು – ಕೊಪ್ಪ – ಕಮ್ಮರಡಿ,166.., ಇದನ್ನೂ ಓದಿ : ಶಾಲಾ ಮಕ್ಕಳಲ್ಲಿ ಜಂಕ್ ಫುಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ – ಆರೋಗ್ಯ ಸಚಿವ ಯು.ಟಿ. ಖಾದರ್

Related posts

ʼನೀವು ನಿಷ್ಪ್ರಯೋಜಕರುʼ – ಸಿಜೆಪಿ ವಕ್ತಾರ ಸೌರವ್ ದಾಸ್ ಟೀಕೆಗೆ ಕಂಗನಾ ಕಿಡಿ

Kalpana Editor

ಕೆಪಿಎಸ್‌ಸಿ ನೇಮಕಾತಿ; 2024ನೇ ಸಾಲಿನ ಈ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮಹತ್ವದ ಸೂಚನೆ..!

Kalpana Editor

ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ

Kalpana Editor