28.9 C
ಬೆಂಗಳೂರು
June 10, 2026
kranthikidi.com
ಕ್ರೀಡೆತಾಜಾಸುದ್ದಿದೇಶ

ಆಟಗಾರ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕ್ರಿಸ್ ಗೇಲ್

ಚಂಡೀಗಢ : ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಇದರ ಬೆನ್ನಲ್ಲೇ ಇದೀಗ ಕ್ರಿಸ್ ಗೇಲ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅತ್ಯುತ್ತಮ ವೈಭವ್ ಸೂರ್ಯವಂಶಿ, ಹೊಸ ಸಿಕ್ಸರ್ ಯಂತ್ರ ಎಂದು ಬಣ್ಣಿಸಿದ್ದಾರೆ.

ಈ ಪಂದ್ಯದಲ್ಲಿ ಕೇವಲ 3 ರನ್‌ಗಳ ಅಂತರದಲ್ಲಿ ಅವರು ಶತಕ ವಂಚಿತರಾದರು. 2012ರ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ 59 ಸಿಕ್ಸರ್ ಸಿಡಿಸಿದ್ದರು. ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸೂರ್ಯವಂಶಿ ಒಟ್ಟು ಈ ಋತುವಿನಲ್ಲಿ ಒಟ್ಟು 65 ಸಿಕ್ಸರ್ ಸಿಡಿಸಿ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ನಡುವೆ ವೈಭವ್ ಸೂರ್ಯವಂಶಿ ಗೇಲ್ ಅವರ ಅತ್ಯಂತ ವೇಗದ ಐಪಿಎಲ್ ಶತಕದ(30 ಎಸೆತ) ಸಿಡಿಸಿ ಈ ದಾಖಲೆ ಮುರಿಯುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೇಲ್, ಇದು ದುರದೃಷ್ಟಕರ, ಆದರೆ ಅವರು ಈ ದಾಖಲೆಯನ್ನು ಮುರಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಋತುವಿನಲ್ಲಿ ಸೂರ್ಯವಂಶಿ 15 ಇನ್ನಿಂಗ್ಸ್‌ಗಳಲ್ಲಿ 45.33 ಸರಾಸರಿಯಲ್ಲಿ ಮತ್ತು 242.85 ಸ್ಟ್ರೈಕ್ ರೇಟ್‌ನಲ್ಲಿ 680 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಒಳಗೊಂಡಿವೆ. ಅವರು ಎದುರಿಸಿರುವ 280 ಎಸೆತಗಳಲ್ಲಿ 55 ಬೌಂಡರಿ ಮತ್ತು 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರ ಬೌಂಡರಿ ಶಾಟ್‌ಗಳ ಅನುಪಾತ ಶೇ.2.3 ಮತ್ತು ಪ್ರತಿ ಆರು ಎಸೆತಗಳ ಅನುಪಾತವು ಶೇ4.3 ರಷ್ಟಿದೆ.

ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿ ಗೇಲ್ ಅವರ ಈ ಹಿಂದಿನ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಈ ಋತುವಿನಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸುವ ಮೂಲಕ ಈ ದಾಖಲೆ ಬರೆದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಆವೃತ್ತಿಯೊಂದರಲ್ಲಿ ಅನ್‌ಕ್ಯಾಪ್ಡ್ ಭಾರತೀಯ ಬ್ಯಾಟರ್ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆಯೂ ಇದೀಗ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ.

ಈ ದಾಖಲೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಹೆಸರಿನಲ್ಲಿತ್ತು. ಅವರು 2023ರಲ್ಲಿ 625 ರನ್ ಗಳಿಸಿದ್ದರು. ಇದೀಗ 680 ರನ್ ಸಿಡಿಸುವ ಮೂಲಕ ಸೂರ್ಯವಂಶಿ ಹಿಂದಿಕ್ಕಿದ್ದು, ಐಪಿಎಲ್ ಋತುವಿನಲ್ಲಿ 600 ರನ್ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎಡಗೈ ಯಾವೊಬ್ಬ ಎಡಗೈ ಬ್ಯಾಟರ್ ಕೂಡ 600 ರನ್ ಗಳಿಸಿರಲಿಲ್ಲ. ವೈಭವ್ ಇದೀಗ ಈ ದಾಖಲೆಯನ್ನು ಬರೆದಿದ್ದಾರೆ.

Related posts

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೂ. 3ರಂದು ಡಿಕೆಶಿ ಪ್ರಮಾಣವಚನ..!

Kalpana Editor

ಕೇರಳಂನ ಮಾಜಿ ಸಿಎಂ ಪಿಣರಾಯಿ ನಿವಾಸದ ಮೇಲೆ ಇಡಿ ದಾಳಿ..!

Kalpana Editor

ಕ್ರೀಡಾ ಇಲಾಖೆ, ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ; ಅಧಿಕಾರಿಗಳಿಗೆ ಡಿಸಿಎಂ ಜಿ.ಪರಮೇಶ್ವರ್‌ ಸೂಚನೆ..!

Kalpana Editor