29.9 C
ಬೆಂಗಳೂರು
October 8, 2026
kranthikidi.com
ತಾಜಾಸುದ್ದಿರಾಜ್ಯ

ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ; ಸಂಧ್ಯಾ ನಾಗರಾಜ್ ವಿರುದ್ಧ ದೂರು..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾಗೌಡ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬೆಂಗಳೂರಿನ ಸಂಧ್ಯಾ ನಾಗರಾಜ್‌ ವಿರುದ್ಧ ದೂರು ನೀಡಲಾಗಿದೆ.

ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಧ್ಯಾ ನಾಗರಾಜ್‌, ಜೈಲಿನಲ್ಲಿ ಅಧಿಕಾರಿಗಳು ಆಕೆಗೆ ಸಹಕಾರ ಕೊಡ್ತಿದ್ದಾರೆ. ಪ್ರತಿದಿನ ಬಾಕ್ಸ್‌ನಲ್ಲಿ ಊಟ ತಂದುಕೊಡ್ತಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿಂದೆ ಜೈಲಿನಲ್ಲಿ ಇದ್ದ ಸಂಧ್ಯಾ ನಾಗರಾಜ್‌ ಪವಿತ್ರಾಗೌಡ ಅವರನ್ನ ಭೇಟಿ ಮಾಡಿದ್ರಂತೆ. ಹೀಗಾಗಿ ಅವರಿಗೆ ಎಲ್ಲಾ ಸೌಲಭ್ಯ ಸಿಗ್ತಿದೆ ಅಂತ ಮಾಧ್ಯಮಗಳ ಮುಂದೆ ಹೇಳಿದರು.

ಈ ಆರೋಪವನ್ನು ಅಲ್ಲಗಳೆದಿರುವ ಪವಿತ್ರಾಗೌಡ ಜೈಲಿನಲ್ಲಿ ಇದ್ದುಕೊಂಡೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ರಶ್ಮಿ ಎಂಬ ಆರೋಪಿಯೂ ದೂರು ನೀಡಿದ್ದಾರೆ. ಜೈಲಿನಲ್ಲಿರುವ ಪವಿತ್ರಾಗೌಡ ತಮ್ಮ ಆತ್ಮಚರಿತ್ರೆ ಬರೆಯಲು ಆರಂಭಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ : ವೈಭವದ ‘ಸರ್ಜನ್ಸ್ ಡೇ 2026’ ಆಚರಣೆ; ಹಿರಿಯ ಶಸ್ತ್ರಚಿಕಿತ್ಸಕರಿಗೆ ಸನ್ಮಾನ..!

Related posts

ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ..!

Kalpana Editor

ಇಂದು ಡಿಕೆ ಶಿವಕುಮಾರ್‌ಗೆ ಪಟ್ಟಾಭಿಷೇಕ – ಶಕ್ತಿಶಾಲಿ ಮಾಲವ್ಯ ಯೋಗದ ಮುಹೂರ್ತ..!

Kalpana Editor

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ; ಅನ್ನದಾತರ ಆಕ್ರೋಶ..!

Kalpana Editor