29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ, ನಡೆಸಿದವರಿಗೆ ಸಚಿವ ಸ್ಥಾನ; ತನ್ವೀರ್ ಸೇಠ್

ಮೈಸೂರು : ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸೆ ನಿರಾಸೆ ಆಗಿದೆ. ರಾಹುಲ್ ಗಾಂಧಿಗೆ ಎಂಬ ಪದ ಬಳಕೆ ಮಾಡಿದ್ದಕ್ಕೆ ಕೆ.ಎನ್ ರಾಜಣ್ಣರನ್ನು ತಕ್ಷಣ ವಜಾ ಮಾಡಿದರು. ಮೈಸೂರು ಪ್ರಾಂತ್ಯಕ್ಕೆ ಸಿಗಬೇಕಾದ ಶಕ್ತಿ ಸಿಕ್ಕಿಲ್ಲ. ಇದು ಆಶಾದಾಯಕ ಪಟ್ಟಿಯಲ್ಲ. ಸಚಿವ ಸಂಪುಟಕ್ಕೆ ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಆದರೆ ಈ ಭಾಗಕ್ಕೆ ದೊಡ್ಡ ಅನ್ಯಾಯವಾಗಿದೆ. ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಕಾರ್ಯಕರ್ತರು ಏನೂ ಹೇಳುತ್ತಾರೋ ಅದೇ ರೀತಿ ಮಾಡುತ್ತೇನೆ. ಯಾವ ಮಾನದಂಡದ ಮೇಲೆ ಸಚಿವ ಸಂಪುಟ ರಚನೆ ಆಗಿದೆ ಗೊತ್ತಿಲ್ಲ. ದಾವಣಗೆರೆ ಉಪ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೂ ಸಚಿವ ಸ್ಥಾನ ಇಲ್ಲ ಎಂದರು.

ಅಲ್ಲಿನ ಮಲ್ಲಿಕಾರ್ಜುನ ಖರ್ಗೆಗೂ ಇಲ್ಲ. ಪಕ್ಷಕ್ಕೆ ಸವಾಲು ಹಾಕಿದವರಿಗೆ ಸಚಿವ ಸ್ಥಾನ ಸಿಗುತ್ತಿದೆ. ಪಕ್ಷಕ್ಕೆ ನಿಷ್ಠರಾಗಿದ್ದವರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದರ ಹಿಂದೆ ಅನೇಕರ ಕೈ ಚಳಕ ಇದೆ. ಪಕ್ಷದಿಂದ ಕೈ ತಪ್ಪಿಲ್ಲ, ನಮ್ಮ ನಾಯಕರಿಂದ ನನಗೆ ಕೈ ತಪ್ಪಿದೆ. ಹೈಕಮಾಂಡ್ ಮೇಲೆ ಯಾವ ರೀತಿ ಚಾಡಿ ಹೇಳಲು ಏನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ : ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

Related posts

ನನ್ನ ಮಗಳಿಗೆ ಜೀವದಾನ ಸಿಕ್ಕಿದೆ – ಪ್ರಧಾನಿಗೆ ಧನ್ಯವಾದ ತಿಳಿಸಿದ ಬಾಲಕಿ ತಾಯಿ

Kalpana Editor

ರನ್ಯಾ ರಾವ್ ಪ್ರಕರಣ; ಸಿಸಿಟಿವಿ ದೃಶ್ಯ ನೀಡಲು ಹೈಕೋರ್ಟ್ ಸೂಚನೆ..!

kknewskannada1987@gmail.com

ಬಾಲಿವುಡ್ ನಟಿ ಜಾಕ್ವೆಲಿನ್​​ ಕೋರಿಕೆಗೆ ನೋ ಎಂದ ಕೋರ್ಟ್​; ಹೆಚ್ಚಿತು ಸಂಕಷ್ಟ..!

Kalpana Editor