August 1, 2026
kranthikidi.com
ತಾಜಾಸುದ್ದಿಸಿನಿಮಾ

‘ಛೀ, ನಾಚಿಕೆಗೇಡು’: ಕಂಗನಾ ಹೇಳಿಕೆಗೆ ಸೋನು ಸೂದ್ ತಿರುಗೇಟು..!

ಕಂಗನಾ ರನೌತ್, ಮೊದಲಿನಿಂದಲೂ ಬಿಜೆಪಿಯನ್ನು ಕೇಂದ್ರ ಸರ್ಕಾರವನ್ನು ಯಾವುದೇ ವಿಷಯದಲ್ಲಾಗಲಿ ಬೆಂಬಲಿಸುತ್ತಲೇ ಬಂದಿದ್ದಾರೆ. ಹಿಂದೆ ರೈತ ಹೋರಾಟ ನಡೆದಾಗ, ಸರ್ಕಾರದ ವಿರುದ್ಧ ಹೋರಾಡಿದ ರೈತರನ್ನು ಭಯೋತ್ಪಾದಕರು ಎಂದಿದ್ದರು, ವೃದ್ಧ ರೈತ ಮಹಿಳೆಯನ್ನು ವೇಶ್ಯಗೆ ಸಹ ಹೋಲಿಸಿ ಟ್ವೀಟ್ ಮಾಡಿದ್ದರು. ಆ ಸಮಯದಲ್ಲಿ ಕಂಗನಾ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು.

ಈಗ ಜೆನ್-ಜಿಗಳು ಸರ್ಕಾರದ ವಿರುದ್ಧ ಬೀದಿಗಿಳಿದಾಗಲೂ ಸಹ ಕಂಗನಾ ಮತ್ತೊಮ್ಮೆ ತಮ್ಮ ಹರಿತವಾದ ನಾಲಗೆ ಹರಿಬಿಟ್ಟಿದ್ದು, ‘ಜೆನ್-ಜಿ’ ಅನ್ನು ‘ಜನರೇಷನ್ ಗಟರ್’ ಎಂದಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕವಾಗಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಇದೀಗ, ನಟ, ಸಮಾಜ ಸೇವಕ ಸೋನು ಸೂದ್, ಕಂಗನಾರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಸೋನು ಸೂದ್, ‘ನಾನು ಅವರ ಹೇಳಿಕೆಯನ್ನು ಕೇಳಿಲ್ಲ. ಆದರೆ ಈ ಯುವಕರೇ ನಟರನ್ನು ಸೃಷ್ಟಿಸುವವರು ಮತ್ತು ನೀವಿರುವ ಸ್ಥಾನಕ್ಕೆ ತಲುಪಲು ಸಹಾಯ ಮಾಡುವವರು ಅವರೇ. ಅವರು ನಿಮ್ಮ ಬೆಂಬಲಕ್ಕೆ ನಿಂತಿರುವವರೆಗೆ ನೀವು ಅಭಿವೃದ್ಧಿ ಹೊಂದುತ್ತೀರಿ. ಅವರು ನಿಮ್ಮೊಂದಿಗೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗಬೇಕು’ ಎಂದಿದ್ದಾರೆ.

ಕಂಗನಾ ಅವರು ಜೆನ್-ಜಿ ಅನ್ನು ‘ಜನರೇಷನ್ ಗಟರ್’ ಎಂದು ಕರೆದಿರುವ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ, ಸೋನು, ಅವರು ಹಾಗೆ ಹೇಳಿದ್ದರೆ, ಅದು ತುಂಬಾ ಅವಮಾನಕರ ಎಂದು ನಾನು ಭಾವಿಸುತ್ತೇನೆ. ಅದನ್ನು ಹೇಳಬಾರದಿತ್ತು, ಮಾತನಾಡುವ ಮೊದಲು ನಿಮ್ಮ ಪದಗಳನ್ನು ತೂಗಿಕೊಳ್ಳಿ ಎಂಬ ಮಾತಿದೆ. ಸಾರ್ವಜನಿಕರು ದೇವರ ಮತ್ತೊಂದು ರೂಪವಾಗಿರುವುದರಿಂದ ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ. ಈ ಹೇಳಿಕೆ ನಾಚಿಕೆಗೇಡಿನ ಸಂಗತಿ’ ಎಂದರು.

ಸೋನು ಸೂದ್ ಮತ್ತು ಕಂಗನಾ ರನೌತ್ ನಡುವೆ ಹಲವು ವರ್ಷಗಳಿಂದಲೂ ಮುನಿಸು ಚಾಲ್ತಿಯಲ್ಲಿದೆ. ಸೋನು ಸೂದ್ ಅವರು ಕಂಗನಾ ನಟನೆಯ ‘ಮಣಿಕರ್ಣಿಕಾ’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಸೋನು ಸೂದ್ ಜೊತೆ ವಿನಾಕಾರಣ ವಿವಾದ ಮಾಡಿಕೊಂಡಿದ್ದ ಕಂಗನಾ, ಸೋನು ಸೂದ್​​ರನ್ನು ಹೇಳದೆ ಕೇಳದೆ ಸಿನಿಮಾದಿಂದ ತೆಗೆದಿದ್ದು ಮಾತ್ರವಲ್ಲದೆ, ಅವರು ನಟಿಸಿದ್ದ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಿದರು. ಮಾಧ್ಯಮಗಳ ಮುಂದೆ ಸಹ ಸೋನು ಸೂದ್ ಬಗ್ಗೆ ಕೆಟ್ಟದಾಗಿ, ಅವಮಾನಕರ ರೀತಿಯಲ್ಲಿ ಮಾತನಾಡಿದ್ದರು. ಆಗಿನಿಂದ ಈ ಇಬ್ಬರೂ ಒಟ್ಟಿಗೆ ಕೆಲಸ ಮಾಡಿಲ್ಲ.

ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಯುವಕರನ್ನು ಟೀಕೆ ಮಾಡಿದ್ದ ಕಂಗನಾ, ಅವರನ್ನು ‘ಜನರೇಷನ್ ಗಟರ್’ ಎಂದು ಕರೆದಿದ್ದರು, ಈ ಜನರೇಷನ ಪೋಷಕರ ಆರ್ಥಿಕತೆಯ ಮೇಲೆ ಅವಲಂಬಿತರಾಗಿರುತ್ತಾರೆ, ಮಾದಕದ್ರವ್ಯ, ಪಾನೀಯಗಳು ಅಥವಾ ಲೈಂಗಿಕತೆ ಇಷ್ಟೇ ಅವರಿಗೆ ಬೇಕಾಗಿರುವುದು’ ಎಂದು ಕೀಳಾಗಿ ಮಾತನಾಡಿದ್ದರು. ಇದೀಗ ಕಂಗನಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ..!

Related posts

ವಂಡರ್‌ಲಾ ರೆಸಾರ್ಟ್‌ನಲ್ಲಿರೋ ‘ಕೈ’ ಶಾಸಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ..!

Kalpana Editor

ಗಂಗಾ ನದಿಯಲ್ಲಿ ದೋಣಿ ಮುಳುಗಡೆ; ಇಬ್ಬರ ದುರ್ಮರಣ, 5 ಮಂದಿ ನಾಪತ್ತೆ..!

Kalpana Editor

‘ಕುಂಕುಮ ಭಾಗ್ಯ’ ಹಿಂದಿ ನಟಿ ಸಂಚಿತಾ ಉಗಲೆ ನೇಣಿಗೆ ಶರಣು

Kalpana Editor