25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ..!

ಬನ್ನೇರುಘಟ್ಟ : ಸಾಮಾನ್ಯವಾಗಿ ಮನುಷ್ಯರು ರೂಟ್ ಕೆನಲ್ ಮಾಡಿಸಿಕೊಳ್ಳುತ್ತಾರೆ. ಆದರೆ, ಇದೀಗ ಹುಲಿ ರೂಟ್ ಕೆನಲ್ ಮಾಡಿಸಿಕೊಂಡಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೋರೆ ಹಲ್ಲಿನ ಸೋಂಕಿನಿಂದ ಬಳಲುತ್ತಿದ್ದ `ಸಿಂಚನಾ’ ಎಂಬ ಹುಲಿಗೆ ವೈದ್ಯರ ತಂಡವು ಯಶಸ್ವಿಯಾಗಿ ರೂಟ್ ಕೆನಲ್ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

ಉದ್ಯಾನವನದಲ್ಲಿದ್ದ ಹುಲಿಯು ಪಂಜರವನ್ನು ಕಚ್ಚಿ ಕೋರೆ ಹಲ್ಲಿಗೆ ಹಾನಿ ಮಾಡಿಕೊಂಡಿತ್ತು. ಇದರಿಂದ ಹಲ್ಲಿನ ಸೋಂಕು ಉಂಟಾಗಿತ್ತು. ಅಲ್ಲದೇ ನೋವು ಹೆಚ್ಚಾಗಿ ಹುಲಿ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ಹುಲಿಯ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಎಸ್‌ಒಎಸ್ ಪಶುವೈದ್ಯಕೀಯ ತಂಡದವರು ಹಲ್ಲನ್ನು ತೆಗೆಯದೇ ಮೂರು ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹುಲಿಗೆ ರೂಟ್ ಕೆನಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಹುಲಿ ಚೇತರಿಸಿಕೊಳ್ಳುತ್ತಿದ್ದು, ಉದ್ಯಾನವನದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾಡುತ್ತಿದ್ದಾರೆ. ಈ ಅತ್ಯಾಧುನಿಕ ಚಿಕಿತ್ಸೆಯಿಂದ ಹುಲಿಯ ಹಲ್ಲು ಉಳಿದು, ದೀರ್ಘಕಾಲ ಆರೋಗ್ಯವಾಗಿರಲು ಸಾಧ್ಯವಾಗಿದೆ. ಹುಲಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗ ಹಾಗೂ ವೈದ್ಯರ ತಂಡದ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ : ಕೂಡಲೇ ಬರ ಘೋಷಿಸದಿದ್ದರೆ, ಚಲೋ ಹೊಲ ಗದ್ದೆ ಧರಣಿ ಆರಂಭ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ..!

Related posts

ಮೇಕೆದಾಟುಗೆ ಅಡ್ಡಗಾಲು ಹಾಕಲು ಮುಂದಾದ ತಮಿಳುನಾಡಿಗೆ ಹಿನ್ನಡೆ..!

Kalpana Editor

ಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ರು – ಅತ್ತೆ ನೆನೆದು ಅಳಿಯ ಭಾವುಕ..!

Kalpana Editor

ರೌಡಿಶೀಟರ್‌ನ ಬರ್ಬರ ಹತ್ಯೆ – ದುಷ್ಕರ್ಮಿಗಳು ಪರಾರಿ..!

Kalpana Editor