July 12, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿದ್ದ, ವಿದ್ಯಾರ್ಥಿನಿ ಆತ್ಮಹತ್ಯೆ..!

ಚೆನ್ನೈ : ಕೊಯಮತ್ತೂರು ಜಿಲ್ಲೆಯಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅನುಕೀರ್ತನಾ (19) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಈಕೆ ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದಳು. ಮತ್ತೊಮ್ಮೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಳು ಎಂದು ಹೇಳಲಾಗಿದೆ.

ಇತ್ತೀಚಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಮಾನಸಿಕವಾಗಿ ತೀವ್ರ ಕುಗ್ಗಿದ್ದಳು. ಸ್ಥಳದಲ್ಲಿ ಯಾವುದೇ ಡೆತ್‌ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗೆ ಕಾರಣವಾಗಿದೆ. ನೀಟ್ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ತಮಿಳುನಾಡಿಗೆ ನೀಟ್ ವಿನಾಯಿತಿ ನೀಡಬೇಕು ಎಂದು ಡಿಎಂಕೆ ಪುನರುಚ್ಚರಿಸಿದೆ. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಘೋಷಿಸಿದೆ. ನೀಟ್ ಪರಿಚಯಿಸಿದಾಗಿನಿಂದ ತಮಿಳುನಾಡು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ದುಬಾರಿ ಖಾಸಗಿ ತರಬೇತಿಯನ್ನು ಪಡೆಯಲು ಶ್ರೀಮಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಆದರೆ ಬಡ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಿಂದ ಅನ್ಯಾಯವಾಗುತ್ತಿದೆ.

ಹನ್ನೆರಡನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯ ಹೊರತಾಗಿಯೂ, ಬಡ ಮತ್ತು ಗ್ರಾಮೀಣ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆಯಿಂದ ಅನಾನುಕೂಲ ಆಗುತ್ತಿದೆ ಎಂದು ಡಿಎಂಕೆ ವಾದಿಸಿದೆ. ನೀಟ್ ನಿಂದ ವಿನಾಯಿತಿ ನೀಡುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿತ್ತು. ಅದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ : ಸಿಎಂ ಆದ ಬಳಿಕ ವಿಜಯ್‌ರನ್ನ ಭೇಟಿಯಾದ ನಟಿ ಸಮಂತಾ

Related posts

ದೇವೇಗೌಡ, ಹೆಚ್​​ಡಿಕೆ ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸುತ್ತೇವೆ – ಸುರೇಶ್ ಗೌಡ

Kalpana Editor

ನೀಟ್ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯತಿ; ಯೋಗಿ ಸರ್ಕಾರದಿಂದ ಆದೇಶ..!

Kalpana Editor

ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ; 7 ಮಂದಿ ಬಂಧನ..!

Kalpana Editor