28.1 C
ಬೆಂಗಳೂರು
October 8, 2026
kranthikidi.com
ತಾಜಾಸುದ್ದಿರಾಜ್ಯ

ಮಣಿಪಾಲದಲ್ಲಿ ಶಾಲಾ ಬಸ್ ಅಪಘಾತ; ಡಿವೈಡರ್ ಮೇಲೇರಿದ ಬಸ್..!

ಉಡುಪಿ : ಅಲ್-ಇಬಾದಾದ್ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಇಂದಯ (ಗುರುವಾರ) ಬೆಳಿಗ್ಗೆ ಮಣಿಪಾಲದ ಐನಾಕ್ಸ್ (ಸಿನಿಗ್ಯಾಲಕ್ಸಿ) ಮುಂಭಾಗ ಅಪಘಾತಕ್ಕೀಡಾಗಿ ಡಿವೈಡರ್ ಮೇಲೇರಿ ನಿಂತ ಘಟನೆ ನಡೆದಿದೆ.

ಮಣಿಪಾಲ ಟ್ರಾಫಿಕ್ ಸಿಗ್ನಲ್‌ನಿಂದ ಲಕ್ಷ್ಮೀಂದ್ರನಗರ ಕಡೆಗೆ ಸಾಗುವ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ಹೆದ್ದಾರಿಯ ಡಿವೈಡರ್ ಮೇಲೇರಿ ನಿಂತಿದ್ದು, ಅಪಘಾತದ ರಭಸಕ್ಕೆ ತಡೆಬೇಲಿ ಹಾಗೂ ಬಸ್‌ನ ಮುಂಭಾಗ ಹಾನಿಗೊಳಗಾಗಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ. ಅಪಘಾತದ ಕಾರಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ : ತಮಿಳುನಾಡಿನಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಉಂಗುರ; ಷರತ್ತುಗಳೇನು..?

Related posts

ವಿಐಪಿ ಸೆಲ್‌ನಿಂದ ಪ್ರಜ್ವಲ್‌ ಎತ್ತಂಗಡಿ; ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆ..!

kknewskannada1987@gmail.com

ಪಿಜಿಯಲ್ಲಿ ಸಿಲಿಂಡರ್ ಬ್ಲಾಸ್ಟ್ – 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..!

Kalpana Editor

ವಿಬಿ-ಜಿರಾಮ್‌ಜಿ ಅಡಿ ಕೆಲಸ ಮಾಡಿದವರಿಗೆ, ಕೂಲಿ ಹಣ ಪಾವತಿಸದಿದ್ರೆ ಕ್ರಮ; ಈಶ್ವರ ಖಂಡ್ರೆ

kknewskannada1987@gmail.com