21.4 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯ

ಬಸ್ ಟಿಕೆಟ್ ದರ ಏರಿಕೆಯ ಸುಳಿವು ನೀಡಿದ ಬೈರತಿ ಸುರೇಶ್

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳದ ಸುಳಿವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ್ದಾರೆ. ಈ ಕುರಿತು ಜೊತೆ ಸಾರಿಗೆ ಸಚಿವ ಮಾತನಾಡಿ, ಕೇಂದ್ರ ಕಾರಣ ರಾಜ್ಯ ಕಾರಣ ಅಂತ ಮಾತಾಡಲ್ಲ. ಇಡೀ ದೇಶದಲ್ಲಿ ತೈಲ ದರ ಹೆಚ್ಚಾಗಿದೆ. ಅದಕ್ಕೆ ಅನುಪಾತವಾಗಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆ ಇದೆ. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ.

ಸಿಎಂ ಜತೆ ಮಾತಾಡ್ತೇವೆ, ಸರ್ಕಾರ ಏನು ತೀರ್ಮಾನ ತಗೊಳ್ಳುತ್ತೋ ಅದರ ಪ್ರಕಾರ ಹೆಚ್ಚಿಸಲಾಗುತ್ತೆ ಎಂದರು. ಬಸ್ ಟಿಕೆಟ್ ದರ ಹೆಚ್ಚಳ ವಿರೋಧ ಮಾಡಲು ಇಲ್ಲಿ ಕಾರಣನೇ ಇಲ್ಲ. ಬಿಜೆಪಿಯವರಿಗೂ ತೈಲ ದರ ಹೆಚ್ಚಾಗಿರೋದು ಗೊತ್ತು. ನಮ್ಮ ಸಾರಿಗೆಯ ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೀತಿವೆ. ಐದು ಸಾವಿರ ಕೋಟಿ ನಷ್ಟದಲ್ಲಿ ಸಾರಿಗೆ ನಿಗಮಗಳು ನಡೀತಿವೆ.

ಅದನ್ನು ಸರಿದೂಗಿಸಬೇಕಲ್ಲ, ಸಿಬ್ಬಂದಿಗೂ ವೇತನ ಕೊಡಬೇಕಲ್ಲ. ಬಸ್‌ಗಳಿಗೆ ಡೀಸೆಲ್ ಹಾಕಿಸಬೇಕಲ್ಲ. ಚರ್ಚೆ ಮಾಡಿ ಟಿಕೆಟ್ ದರ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ವಿದ್ಯಾರ್ಥಿಗಳ ಪಾಸ್‌ಗೆ ಸಮಸ್ಯೆ ಏನೂ ಆಗ್ತಿಲ್ಲ. ಸ್ಟ್ರೀಮ್ ಲೈನ್ ಮಾಡಿ ಪಾಸ್ ವಿತರಣೆ ಮಾಡ್ತೇವೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್ ಕೊಡ್ತೇವೆ ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು. ಏನೇ ಇದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇತಿಹಾಸದಲ್ಲಿ ಯಾವಾಗಲಾದರೂ ಸಿಎಂ ಹಾಗೂ ಕೇಂದ್ರ ಸಚಿವ ಬಹಿರಂಗ ಚರ್ಚೆ ಮಾಡಿದ್ದಾರಾ? ಅಲ್ಲಿ ಹೋಗಿ ಚರ್ಚೆಗೆ ಬನ್ನಿ ಅನ್ನೋದು ಸರಿನಾ? ರಾಜ್ಯದ ಘನತೆಗೆ ಧಕ್ಕೆ ಆಗುತ್ತೆ ಇದರಿಂದ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ : ಬೆಂಗಳೂರಲ್ಲಿ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೆ ಏರಿಕೆ..!

Related posts

ಮಾಜಿ ಸಚಿವ ನಾಗೇಂದ್ರ ಅಕ್ರಮಗಳ ಬಗ್ಗೆ ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ

Kalpana Editor

ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆ; ಸಸಿ ನೆಡುವ ಬೃಹತ್ ಅಭಿಯಾನ..!

Kalpana Editor

ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಹೊಸ ಪ್ರಜಾಸೇವೆ ಇಲಾಖೆ ಸ್ಥಾಪನೆ – ಡಿಕೆಶಿ

Kalpana Editor