August 26, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ರಾಮನಗರದಲ್ಲಿ ಮಾತ್ರ ಹಾಗಾಗಿದೆ, SIR ದುರ್ಬಳಕೆ ಮಾಡಿಕೊಂಡಿಲ್ಲ; ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ – ಯತೀಂದ್ರ

ಬೆಂಗಳೂರು : ಎಸ್‌ಐಆರ್ ದುರ್ಬಳಕೆ ಮಾಡಿಕೊಂಡಿಲ್ಲ, ರಾಮನಗರದಲ್ಲಿ ಮಾತ್ರ ಹಾಗಾಗಿದೆ, ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಸ್‌ಐಆರ್ ಲೋಪದ ಬಗ್ಗೆ ವಿಪಕ್ಷಗಳ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಯಾವುದೇ BLOಗಳು ಮಿಸ್ ಯೂಸ್ ಮಾಡಿಕೊಂಡಿಲ್ಲ. ರಾಮನಗರದಲ್ಲಿ ಮಾತ್ರ ಆ ರೀತಿ ಆಗಿದೆ.

ಅದೂ ಕೂಡ ಎಸ್‌ಐಆರ್ ಬಗ್ಗೆ ಮಾಹಿತಿ ಕೊಡೋಕೆ ಒಂದು ಕಡೆ ಸೇರಿದ್ದಾರೆ ಅಷ್ಟೆ. ಇದಕ್ಕೆ ಎಸ್‌ಐಆರ್ ಮಿಸ್ ಯೂಸ್ ಅಂತ ವಿಪಕ್ಷಗಳು ಆರೋಪ ಮಾಡ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನ ಎಲೆಕ್ಷನ್ ಕಮೀಷನ್ ನಡೆಸುತ್ತಿದೆ. ಇದರಲ್ಲಿ ಯಾವುದೇ ರೀತಿ ಅವ್ಯವಹಾರ ಆಗಿಲ್ಲ. ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಸುಮ್ಮನೆ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಯತೀಂದ್ರ ಖಾತೆ ಬದಲಾವಣೆ ಮಾಡುವಂತೆ ನೈಜ ಹೋರಾಟಗಾರ ವೇದಿಕೆಯಿಂದ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಕೇಸ್ ದೂರು ನನ್ನ ಮೇಲೆ ಇರೋದಲ್ಲ. ತಂದೆ-ತಾಯಿ ಮೇಲೆ ಕೇಸ್ ಹಾಕಿದ್ರು. ಈಗಾಗಲೇ ಲೋಕಾಯುಕ್ತ ತನಿಖೆ ವರದಿ ಕೊಟ್ಟಿದೆ. ಆ ವರದಿಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಒಪ್ಪಿದೆ. ಈಗಾಗಲೇ ತನಿಖೆ ಮುಗಿದಿದೆ. ತನಿಖೆ ಮುಗಿದಿರೋದ್ರಿಂದ ನಾವು ಹಸ್ತಕ್ಷೇಪ ಮಾಡೋದೇನಿದೆ. ಖಾತೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ ಎಂದರು.

ಸಾರ್ವಜನಿಕ ವಲಯದಲ್ಲಿ ಇಂತಹ ಟೀಕೆ ಬರುತ್ತೆ. ಎದುರಿಸಬೇಕು ಎಂದಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಯಾವಾಗ ಕರೆಯುತ್ತಾರೆ ಆಗ ನಾಯಕರು ಹೋಗ್ತಾರೆ. ಆಗ ವಿಸ್ತರಣೆ ಆಗುತ್ತದೆ. ಈ ತಿಂಗಳೊಳಗೆ ಕ್ಯಾಬಿನೆಟ್ ವಿಸ್ತರಣೆ ಆಗಬಹುದು. ನಾನು ಹೆಚ್ಚುವರಿ ಖಾತೆ ಕೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : ಆರ್‌ಎಸ್‌ಎಸ್‌ಗೆ ಬಿಗ್​​ ಶಾಕ್​​ ಕೊಟ್ಟ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

Related posts

2028ಕ್ಕೂ ಡಿಕೆ ಶಿವಕುಮಾರ್‌ ಸಿಎಂ; ಸಚಿವ ಶಿವರಾಜ್ ತಂಗಡಗಿ ಭವಿಷ್ಯ..!

kknewskannada1987@gmail.com

ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ – ವಿ.ಸೋಮಣ್ಣ

Kalpana Editor

ರೌಡಿಶೀಟರ್‌ನ ಬರ್ಬರ ಹತ್ಯೆ – ದುಷ್ಕರ್ಮಿಗಳು ಪರಾರಿ..!

Kalpana Editor