26.3 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿರಾಜ್ಯ

ಫಾರ್ಮ್‌ ಹೌಸ್ ಗೇಟ್ ಬಳಿ ನಾಡಬಾಂಬ್ ಸ್ಫೋಟ; ವಕೀಲನ ಸ್ಥಿತಿ ಗಂಭೀರ..!

ರಾಮನಗರ : ನಾಡಬಾಂಬ್ ಸ್ಫೋಟಗೊಂಡು ವಕೀಲರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹಾರೋಹಳ್ಳಿ ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ಮೋಹನ್ ಗಾಯಗೊಂಡ ವಕೀಲ. ಮೋಹನ್ ಸುಂಡಗಟ್ಟ ಗ್ರಾಮದಲ್ಲಿ ಫಾರ್ಮ್ ಹೌಸ್ ಹೊಂದಿದ್ದರು. ಗುರುವಾರ ತಡರಾತ್ರಿ ತಮ್ಮ ಫಾರ್ಮ್ ಹೌಸ್‌ಗೆ ಬಂದು ತಂಗಿದ್ದರು ಎನ್ನಲಾಗಿದೆ. ಈ ವೇಳೆ ಯಾರೋ ಕಿಡಿಗೇಡಿಗಳು, ಫಾರ್ಮ್ ಹೌಸ್‌ನ ಗೇಟ್ ಬಳಿ ನಾಡಬಾಂಬ್ ಇಟ್ಟಿದ್ದಾರೆ.

ಶುಕ್ರವಾರ (ಜೂ.26) ಮುಂಜಾನೆ ಮೋಹನ್ ಫಾರ್ಮ್ ಹೌಸ್‌ನಿಂದ ಹೊರಬಂದಾಗ, ಗೇಟ್ ಬಳಿ ಇಟ್ಟಿದ್ದ ನಾಡಬಾಂಬ್ ಗಮನಿಸದೇ ಅದರ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಕೀಲ ತೀವ್ರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಡಲಾಗಿತ್ತು ಎನ್ನಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದನ್ನೂಓದಿ : ಎಲಿವೇಟೆಡ್ ಕಾರಿಡಾರ್ ಹೆಸರಿನಲ್ಲಿ ಬೆಂಗಳೂರಿಗರ ಮೇಲೆ ಮತ್ತೊಂದು ತೆರಿಗೆ ದರೋಡೆ; ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಿರಿ – ಆಮ್ ಆದ್ಮಿ ಪಕ್ಷ ಆಗ್ರಹ..!

Related posts

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂಗೆ ವಿಜಯ್ ಸೇತುಪತಿ ಮನವಿ

Kalpana Editor

ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ – ಮೈದುಂಬಿ ಹರಿಯುತ್ತಿರುವ ಕೃಷ್ಣ..

Kalpana Editor

ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ; ಆನೆಧಾಮಕ್ಕೆ ಶೀಘ್ರವೇ ಟೆಂಡರ್ – ಸಚಿವ ಈಶ್ವರ ಖಂಡ್ರೆ

Kalpana Editor