28.2 C
ಬೆಂಗಳೂರು
July 11, 2026
kranthikidi.com
ತಾಜಾಸುದ್ದಿದೇಶ

E20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ – ನಿತಿನ್ ಗಡ್ಕರಿ

ನವದೆಹಲಿ : ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಟೀಕೆಗಳ ಮಧ್ಯೆ ಇ20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸವಾಲು ಹಾಕಿದ್ದಾರೆ. ನೆನ್ನೆ (ಮಂಗಳವಾರ) ವಿಕಸಿತ್ ಭಾರತ್ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಎಥನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಪ್ರತಿಪಾದನೆಗಳು ಹರಡಲಾಗುತ್ತಿದೆ ಎಂದು ಆರೋಪಿಸಿದರು.

ಇ20 ಪೆಟ್ರೋಲ್‌ನಿಂದ ಸಮಸ್ಯೆ ಎದುರಿಸುತ್ತಿರುವ ಯಾವ ಕಾರೂ ಇಲ್ಲ. ದೇಶದಲ್ಲಿ ಯಾವುದಾದರೂ ಕಾರು ಸಮಸ್ಯೆ ಎದುರಿಸಿದೆಯೇ? ಒಂದನ್ನಾದರೂ ಹೆಸರಿಸಿ ಎಂದು ಗಡ್ಕರಿ ಹೇಳಿದ್ದಾರೆ. ಇದು ಪ್ರಾಯೋಜಿತ ಅಭಿಯಾನವಾಗಿದೆ ಎಂದೂ ಅವರು ದೂರಿದ್ದಾರೆ. ಇಂಧನ ಕ್ಷಮತೆ ಕುಸಿಯುತ್ತಿದೆ. ಹಳೆಯ ವಾಹನಗಳಲ್ಲಿ ಹೊಂದಾಣಿಕೆ ಸಮಸ್ಯೆ ಉಂಟಾಗುತ್ತಿದೆ ಮತ್ತು ದೀರ್ಘಕಾಲೀನವಾಗಿ ಇಂಜಿನ್‌ಗೆ ಹಾನಿಯಾಗುತ್ತದೆ ಎಂಬ ಕಳವಳಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ಗಡ್ಕರಿ ಅವರ ಈ ಹೇಳಿಕೆ ಬಂದಿದೆ.

ಇಳಿಕೆಯಾಗಿರುವ ಇಂಧನ ಕ್ಷಮತೆ, ಹಳೆಯ ವಾಹನಗಳಲ್ಲಿ ಕಂಡುಬಂದಿರುವ ಹೊಂದಾಣಿಕೆ ಸಮಸ್ಯೆ ಹಾಗೂ ಅಧಿಕ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡುವುದರಿಂದ, ಇಂಜಿನ್ ಮೇಲೆ ಆಗಲಿರುವ ದೀರ್ಘಕಾಲೀನ ಪರಿಣಾಮಗಳ ಕುರಿತು ಕಳವಳ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಕಚ್ಚಾ ತೈಲ ಆಮದನ್ನು ಕಡಿತಗೊಳಿಸುವ, ಇಂಗಾಲ ಹೊರ ಸೂಸುವಿಕೆಯನ್ನು ತಗ್ಗಿಸುವ ಹಾಗೂ ದೇಶೀಯ ಕೃಷಿಗೆ ಬೆಂಬಲ ಒದಗಿಸುವ ತನ್ನ ಕಾರ್ಯಯೋಜನೆಯ ಭಾಗವಾಗಿ ಈಗಾಗಲೇ ಭಾರತ ಇ20 ಇಂಧನ ಎಂದೇ ಕರೆಯಲಾಗುವ ಪೆಟ್ರೋಲ್‌ಗೆ ಶೇ. 20ರಷ್ಟು ಎಥನಾಲ್ ಮಿಶ್ರಣಗೊಳಿಸುವ ಗುರಿಯನ್ನು ಸಾಧಿಸಿದೆ. ಇದನ್ನೂ ಓದಿ : ಟಾಕ್ಸಿಕ್ ಚಿತ್ರದ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ – ರೊಮ್ಯಾಂಟಿಕ್ ಹಾಡಿಗೆ ನೆಟ್ಟಿಗರು ಫಿದಾ..!

Related posts

ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

Kalpana Editor

ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು – ನಟಿ ರಮ್ಯಾ

Kalpana Editor

ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಅವಿರೋಧ ಆಯ್ಕೆ..!

Kalpana Editor